ತ್ರಿಮಲ್ಲ
1383-1499.  ವೈದ್ಯಗ್ರಂಥಗಳ ಕರ್ತೃ.  ದಕ್ಷಿಣದೇಶದ ತೆಲಗು ಬ್ರಾಹ್ಮಣ ; ವಾರಣಾಸೀ ನಿವಾಸಿ.  ತಂದೆ ಸಿಂಗಣ್ಣಭಟ್ಟನ ಮಗನಾದ ವಲ್ಲಭಭಟ್ಟ.. ಮಗನಾದ ಶಂಕರಭಟ್ಟ ರಸಶಾಸ್ತ್ರವನ್ನು ಕುರಿತ ರಸಪ್ರದೀಪವೆಂಬ ಗ್ರಂಥವನ್ನು ಬರೆದಿದ್ದಾನೆ.  ರಾಮ ಮತ್ತು ಗೋಪರು ಸಹೋದರರು. 1 ದ್ರವ್ಯ ಗುಣಶತ ಶ್ಲೋಕೀ ಅಥವಾ ಪಥ್ಯಾಪಥ್ಯನಿಘಂಟು. 2 ಯೋಗತರಂಗಿಣಿ (ಬೃಹತ್ ಮತ್ತು ಲಘು),  3 ವೈದ್ಯಚಂದ್ರೋದಯ ಮತ್ತು 4  ವೃತ್ತ ಮಾಣಿಕ್ಯಮಾಲಾ- ಇವು ಈತನ ವೈದ್ಯಗ್ರಂಥಗಳು.  ಅಲಂಕಾರ ಶಾಸ್ತ್ರದ ವಿಚಾರವಾಗಿ ಅಲಂಕಾರ ಮಂಜರಿ ಎಂಬ ಒಂದು ಗ್ರಂಥವನ್ನು ಈತ ಬರೆದಿದ್ದಾನೆ.  ಇವೆಲ್ಲ ಸಂಸ್ಕøತದಲ್ಲಿವೆ.

    ದ್ರವ್ಯಗುಣಶತಶ್ಲೋಕಿಯಲ್ಲಿ ನಿತ್ಯ ಬಳಕೆಯ ಆಹಾರ ಪದಾರ್ಥಗಳ ಗುಣಗಳ ವಿಚಾರವೂ ಯೋಗತರಂಗಿಣಿಯಲ್ಲಿ ರೋಗಗಳ ನಿವಾರಣೆಗಾಗಿ ಉಪಯೋಗಿಸುವ ಔಷಧ ಪದಾರ್ಥಗಳ ಸ್ವಭಾವ ಮತ್ತು ಗುಣಗಳ ವಿಮರ್ಶೆಯೂ ವೈದ್ಯಚಂದ್ರೋದಯದಲ್ಲಿ ರೋಗಗಳ ಲಕ್ಷಣಗಳೂ ಇವೆ.   ಅಲಂಕಾರಮಂಜರಿಯಲ್ಲಿ  ಅರ್ಥಾಂಲಕಾರಗಳ ವಿಚಾರವಿದೆ.				(ಕೆ.ವಿ.ಎಸ್.ಎ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ